Forums

Collapse

Announcement

Collapse

ಇದು ಕನ್ನಡ ಗ್ರಾಹಕರ ಕೂಟದ ಒಂದು ಹೊಸ ಪ್ರಯತ್ನ

ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತ ಸ್ಥಿತಿ ಇಂದು ಇದೆಯೇ? ಒಬ್ಬ ಕನ್ನಡಿಗ ತನ್ನದೇ ನಾಡಿನ ಯಾವುದೇ ಅಂಗಡಿ ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ ಮತ್ತು ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದೆ ಸಲೀಸಾಗಿ ವಹಿವಾಟು ಮಾಡುವ ವ್ಯವಸ್ಥೆ ಇಂದು ಇದೆಯೇ ಎಂದು ಗಮನಿಸಿದರೆ ಅಚ್ಚರಿ ಮತ್ತು ನಿರಾಶೆಗೊಳಗಾಗುವ ಸ್ಥಿತಿ ಇಂದು ಕನ್ನಡ ನಾಡಿನಲ್ಲಿದೆ. ಮಾರುಕಟ್ಟೆಯಲ್ಲಿ ಕನ್ನಡದ ಈ ಸ್ಥಿತಿ ಬದಲಾಗಬೇಕಲ್ಲವೇ? ಆ ಬದಲಾವಣೆ ಜಾಗೃತರಾದ ಕನ್ನಡ ಗ್ರಾಹಕರಿಂದ ಮಾತ್ರ ಸಾಧ್ಯ ಅನ್ನುವುದು ನಮ್ಮ ನಿಲುವಾಗಿದ್ದು, ಈ ನಿಟ್ಟಿನಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಎಲ್ಲರಲ್ಲಿ ಜಾಗೃತಿ ಮೂಡಿಸಿಸುವುದು, ಗ್ರಾಹಕ ಸೇವೆಯ ವ್ಯಾಪ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು, ಗ್ರಾಹಕ ಸೇವೆಯಲ್ಲಿ ಭಾಷೆಯ ಆಯಾಮದ ಬಗ್ಗೆ ಜಾಗೃತಿ ಮೂಡಿಸುವುದು, ಅಗತ್ಯ ಬಂದಾಗ ಕಾನೂನು ಬದ್ಧ ಹೋರಾಟಗಳನ್ನು ರೂಪಿಸುವುದು ಮುಂತಾದ ಉದ್ದೇಶಗಳನ್ನು ಹೊತ್ತು “ಕನ್ನಡ ಗ್ರಾಹಕರ ಕೂಟ” ಎಂಬ ಈ ಸಂಸ್ಥೆಯನ್ನು ಆರಂಭಿಸಲಾಯಿತು.

ಕನ್ನಡ ಗ್ರಾಹಕರ ಕೂಟದ ವತಿಯಿಂದ ಹಲವು ಬಾರಿ ಕನ್ನಡ ನಾಡಿನ ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದಿದ್ದಾಗ, ಕನ್ನಡದಲ್ಲಿ ಸೇವೆ ನೀಡುವಾಗ ತಾರತಮ್ಯ ಆದಾಗ ಮತ್ತು ಗ್ರಾಹಕರ ಹಕ್ಕಿಗೆ ಕುತ್ತು ಬಂದಾಗ, ಸಂಘಟನಾತ್ಮಕವಾಗಿ ಅವುಗಳ ಬಗ್ಗೆ ಜನಜಾಗೃತಿ ಮೂಡಿಸುವುದು, ಅಂತರ್ಜಾಲ ತಾಣದಲ್ಲಿ ಜಾಗೃತಿ ಮೂಡಿಸುವುದು, ಸಂಬಂಧಪಟ್ಟ ಸಂಸ್ಥೆ ಮತ್ತು ಅಧಿಕಾರಿಗಳೊಡನೆ ಚರ್ಚಿಸುವುದು, ವಿಷಯದ ಬಗ್ಗೆ ಮಿಂಚೆ(ಈಮೇಲ್) ಅಭಿಯಾನ ನಡೆಸುವುದು, ಸಾಮಾಜಿಕ ತಾಣಗಳಲ್ಲಿ ಜಾಗೃತಿ ಮೂಡಿಸುವುದು, ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವಾಗಿನ ತೊಡಕುಗಳು ಮತ್ತು ಅವನ್ನು ಸರಿಪಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು, ಕನ್ನಡ ಗ್ರಾಹಕತನವನ್ನು ಜಾಗೃತಗೊಳಿಸುವ ಕಮ್ಮಟ, ವಿಚಾರ ಸಂಕಿರಣ ನಡೆಸುವುದು, ಅಗತ್ಯ ಬಿದ್ದಾಗ ಮಾಹಿತಿ ಹಕ್ಕು ಕಾಯ್ದೆ ಬಳಸುವುದು ಮತ್ತು ಕಾನೂನು ಬದ್ಧ ಹೋರಾಟಗಳನ್ನು ರೂಪಿಸುವುದು ಹಾಗೂ ಬೆಂಬಲಿಸುವುದು – ಹೀಗೆ ಹತ್ತು ಹಲವಾರು ರೀತಿಗಳಲ್ಲಿ ಕನ್ನಡಿಗರ ಗ್ರಾಹಕ ಹಕ್ಕನ್ನು ಕಾಯುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಈ ಎಲ್ಲಾ ಕೆಲಸಗಳನ್ನು ಇಲ್ಲಿ ಕಲೆ ಹಾಕಲಾಗುತ್ತಿದೆ. ನಮ್ಮ ಈ ಪ್ರಯತ್ನದಲ್ಲಿ ಕೈ ಜೋಡಿಸುವಿರಿ ಎಂದು ಆಶಿಸುತ್ತೇವೆ.
See more
See less
  • Filter
  • Time
  • Show
  • New Topics
new posts
No content found
Show More
  • Filter
  • Time
  • Show
  • New Topics
new posts
Please log in to your account to view your subscribed posts.
Directory Topics Posts Last Post
ಗ್ರಾಹಕ ಸೇವೆ ಅಥವಾ ನಾಗರೀಕ ಸೇವೆಗಳು ಕನ್ನಡದಲ್ಲಿ ಸಿಗದೇ ಇರುವ ಕಹಿ ಅನುಭವಗಳನ್ನು, ಕನ್ನಡದಲ್ಲಿ ಸೇವೆ ಸಿಕ್ಕಂಥಹ ಸಿಹಿ ಅನುಭವಗಳನ್ನು ಅಥವಾ ಈ ವಿಷಯಕ್ಕೆ ಸಂಬಂಧಿಸಿದ ಇತರೆ ಚರ್ಚೆಗಳನ್ನು ಇಲ್ಲಿ ಮಾಡಬಹುದು
Topics: 346 Posts: 2,357
346 2,357

Latest Topics

Collapse

There are no results that meet this criteria.

Working...
X